ಫೇರ್‍ವೆಲ್ ಮೈ ಫ್ರೆಂಡ್
ಹೋಗಿ ಬಾ ಗೆಳೆಯಾ, ಒಳ್ಳೆಯದಾಗಲಿ ರವೀಂದ್ರನಾಥ ಟಾಗೋರ್ ಅವರ ಫೇರ್‍ವೆಲ್ ಮೈ ಫ್ರೆಂಡ್ ಕಾದಂಬರಿಯನ್ನು ಕನ್ನಡಕ್ಕೆ ತರಬೇಕೆನ್ನುವುದು ನನ್ನ ಬಹುದಿನದ ಬಯಕೆ. ಆದರೆ ಈಗ ಅದರ ಹೆಸರನ್ನಾದರೂ ನಾನು ಸರಿಯಾಗಿ ಭಾಷಾಂತರಿಸಿದೆನೇ ಎನ್ನುವ ಸಂದೇಹ ಇದೆ. ಲೇಖಕ ಚಿದಾನಂದ ಸಾಲಿ ಅವರ ಮುಂದೆ ಈ ಮಾತನ್ನು ಅನ್ನಬಾರದೇ ಅಂದು ಬಿಟ್ಟೆನೋ ಏನೋ. ಅವರು ನನ್ನನ್ನು ಬೆಂಬಿಡದೇ ಕಾಡುವ ಮಾತಾಡಿದ್ದಾರೆ. ಅವರು ಗೆಲ್ಲುತ್ತಾರೋ, ನಾನು ಗೆಲ್ಲುತ್ತೇನೋ ನೋಡಬೇಕು. ಈ ಕಾದಂಬರಿ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ಇದನ್ನು ಜೀನಿಯಸ್ ಎಂದಿದ್ದಾರೆ. ಕೆಲವರು ಸಾಧಾರಣ ಎಂದು ಮರೆತು ಬಿಟ್ಟಿದ್ದಾರೆ. ಆದರೆ ನನಗೆ ಇದು ಎಂದೂ ಮರೆಯದ ಅನುಭವವನ್ನು ನೀಡಿದೆ. ಇದನ್ನು ಬೇರೆಯವರಿಗೆ ಹೇಳದೇ ಇದ್ದರೆ ಪಾಪ ಎನ್ನುವಷ್ಟು ನನ್ನನ್ನು ಇದು ಕಾಡಿದೆ. ಎಷ್ಟೋ ಜನ ಸ್ಹೇಹಿತರಿಗೆ ಇದನ್ನು ಹೇಳಿ ಹೇಳಿ ನಿದ್ದೆ ಕೆಡಿಸಿದ್ದೇನೆ. ಇವನು ಯಾಕಾದರೂ ಇದನ್ನು ಓದಿದನೋ ಅಂತಲೋ, ಅಥವಾ ನಾವು ಯಾಕಾದರೂ ಇವನ ಗೆಳೆಯರಾದೆವೋ ಅಂತ ಅವರಿಗೆ ಅನ್ನಿಸಿರಬಹುದು. ಅದನ್ನು ಕನ್ನಡದಲ್ಲಿ ಬರೆಯಬೇಕು ಅಂತಲೂ ಬಹಳ ಸಾರಿ ಅನ್ನಿಸಿದೆ. ಬರೆಯಲಾರದ್ದಕ್ದೆ ಕಾರಣಗಳೇನೂ ಇಲ್ಲ. ಶಿಸ್ತು ಇರಲಾರದ್ದು, ಸೋಮಾರಿತನ, ಅಥವಾ ಯಾವಾನಿಗೆ ಬೇಕು ಅನ್ನುವ ಮನೋಭಾವ ಇರಬಹುದು. ಈಗ ಮಾಡಲೇ ಬೇಕಾಗಿ ಬಂದಿದೆ. ಈ ಕಾದಂಬರಿ ಟಾಗೋರರ ಯಯಾತಿಯಾಗುವ ಪ್ರಯತ್ನದ ಫಲ ಅಂತ ಯಾರೋ ಹೇಳಿದ್ದಾರೆ. ಇದನ್ನು ಬರೆದಿದ್ದು ಅವರು ತಾನು ಯ