Posts

Showing posts with the label Panchayats

Democracy for Dummies-2

ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ By ಹೃಷಿಕೇಶ್ ಬಹದ್ದೂರ್ ದೇಸಾಯಿ ರಾಜ್ಯದ ೩೦ ಪಂಚಾಯಿತಿಗಳಲ್ಲಿ ಬಿಜೆಪಿ ೧೨ ಸ್ಥಾನ ಗೆದ್ದಿತು, ಕಾಂಗ್ರೆಸ್, ಜೆಡಿಎಸ್ ನಾಲ್ಕು ನಾಲ್ಕು ಗೆದ್ದವು, ಇನ್ನುಳಿದ ೧0 ಅತಂತ್ರ ಅಂತ ಕೆಲವರು ಮೊನ್ನೆ ಸುದ್ದಿ ಬರೆದಿದ್ದಾರೆ. ನಿನ್ನೆಯಿಂದ ಅನೇಕರು ಓದುತ್ತಲೇ ಇದ್ದಾರೆ. ಎಲ್ಲಾ ಕಡೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬಂದು ಪಂಚಾಯಿತಿ ಸಭೆಗಳು ಆರಂಭವಾಗುವವರೆಗೆ ಇಂಥ ಸುದ್ದಿ ಓದಲೇಬೇಕಾದ ಅನಿವಾರ್ಯತೆ ಮತದಾರರೆಂಬ ನಿತ್ಯ ನಾರಕಿಗಳಿಗೆ ಇದೆ. ಹಂಗೆಲ್ಲಾ ಅಂದರೇನು? ಇದರ ಅರ್ಥ ಏನು? ಈ ಜನವರಿ ೪ ನಾಲ್ಕರ ಚುನಾವಣೆ ಫಲಿತಾಂಶದ ಹಕೀಕತ್ತಾದರೂ ಏನು? ಇದು ಬೇಕಿತ್ತೇ? ನಿಮ್ಮೊಡನಿದ್ದೂ ನಿಮ್ಮಂತಿರದ ಬಾಳು “ಇದರ ಸೀದಾ ಸಾದಾ ಅರ್ಥ ಏನೆಂದರೆ, ರಾಜ್ಯದ ಜಿಲ್ಲಾ ಪಂಚಾಯಿತಿಗಳ ಪೈಕಿ ೪೦ ಶೇಕಡಾ ಸಂಸ್ಥೆಗಳಲ್ಲಿ ಬಹುಮತ ಪಡೆದ ಬಿಜೆಪಿ ಹಾಗೂ ಅದರ ಕಮಾಂಡರ್ ಆದ ಯಡಿಯೂರಪ್ಪ ಅವರು ಗೆದ್ದಂತೆ” ಅಂತ ಮುಖ್ಯಮಂತ್ರಿಗಳ ರೇಸ್ ಕೋಸ್ ನಿವಾಸದ ಸುತ್ತಮುತ್ತ ತಿರುಗಾಡುತ್ತಿರುವ ಅವರ ಹಿಂಬಾಲಕರು ಹೇಳುತ್ತಿದ್ದಾರಂತೆ. ಹೇಳಿಕೊಂಡು ಮತ್ತೆ ತಿರುಗಾಡುತ್ತಿದ್ದಾರಂತೆ. ಅಡ್ಡ ವೈಸರ್ ಗಳು ಇನ್ನು ಕೆಲವರು “ಇದಕ್ಕೆ ಸಾಧನೆ ಅಂತಾರೆಯೇ? ಇದು ಕಂಪ್ಲೀಟ್ ಫೇಲ್ಯುರ್. ನಾನು ಮುಖ್ಯಮಂತ್ರಿಯಾಗಿದ್ದರೆ ತೋರಿಸುತ್ತಿದ್ದೆ. ನೂರಕ್ಕೆ ನೂರು ಕಡೆ ನಮ್ಮವರು ಬಂದು ವಿರೋಧ ಪ...