Posts

Showing posts with the label Gadag Sahitya Sammelana

How to outsource the Kannada Sahitya Sammelana

ಕನ್ನಡ ಸಮ್ಮೇಳನ ಹೊರಗುತ್ತಿಗೆ:ಒಂದು ನಿದ್ದೆಗಣ್ಣು ವರದಿ ಗಣ್ಣು ವರದಿ ಹೃಷಿಕೇಶ್ ಬಹದ್ದೂರ್ ದೇಸಾಯಿ ಶುಕ್ರವಾರ, 4 ಫೆಬ್ರವರಿ 2011 (05:34 IST) ಚಿತ್ರ: ಪ್ರಕಾಶ್ ಬಾಬು ರೀ ಸಿಎಂ ಸಾಹೇಬರ ಪಿಎ ಮೀಟಿಂಗ್ ಇದೆ ಅಂತ ಹೇಳಿದ್ದಾರೆ ಏಳ್ರೀ. ಹೋಗ್ರೀ, ಅಂತ ಸಂಪಾದಕರು ರಾತ್ರಿ ಎರಡು ಗಂಟೆಗೆ ಫೋನ್ ಮಾಡಿದರು. ಇಷ್ಟೊತ್ತಿಗೆ ಎಂಥಾ ಮೀಟೀಂಗು ಸಾರ್ ಎಂದೆ. ನನಗೊತ್ತಿದ್ದರೆ ನಾನ್ಯಾಕ್ರೀ ನಿಮಗೆ ಹೇಳ್ತಿದ್ದೆ? ಸುಮ್ಮನೇ ಹೋಗ್ರೀ ಅಂತ ಚೀರಿದರು. ಇವರ‍್ಯಾಕೆ ಚೀರ‍್ತಾರೆ ಅನ್ನಿಸಿತಾದರೂ, ಸಂಪಾದಕರಾದ ಮೇಲೆ ಇಷ್ಟಾದರೂ ಚೀರದಿದ್ದರೆ ಹೇಗೆ ಅಂತ ಅರ್ಥವಾಯಿತು. ಅವರು ಕೂಗಿದ ನಂತರ ನಾನು ಎದ್ದು ನನ್ನ ಹೆಂಡತಿಯನ್ನು ಎಬ್ಬಿಸದೇ ಮುಖ ತೊಳೆದು, ಗಾಡಿ ತೆಗೆದು ಗೇಟಿಗೆ ಕೀಲಿ ಹಾಕುತ್ತಿದ್ದೆ. ಆಗ ನನ್ನ ಹೆಂಡತಿ ಕೂಗಿದಳು. “ಜಾಕೆಟ್ ತೊಗೊಂಡು ಹೋಗ್ರೀ. ಸೀಎಮ್ಮ ಮನಿ ಹತ್ತಿರ ಭಾಳ ಥಂಡಿ ಐತೆಂತ. ಮತ್ತೆ ಒಳಗೆ ಹೋಗಿ ಜಾಕೆಟ್ ಹೊದ್ದು ಹೊರಟೆ. ನಾನು ಮಾಡುವುದು ಎಲ್ಲ ಇವಳಿಗೆ ಹೇಗೆ ಗೊತ್ತಾಗುತ್ತದೆ? ಬಹುಶಃ ನನಗೆ ರೇಡಿಯೋ ಕಾಲರ್ ಹಾಕಿರಬೇಕು, ಅಂದುಕೊಂಡೆ. ಅಲ್ಲಿ ಹೋದರೆ ಸೀಎಮ್ಮ ಅವರ ಮನೆಯಲ್ಲಿ ಸೀಎಮ್ಮೇ ಇಲ್ಲ. ಸೀಎಮ್ ಮನೆಯಲ್ಲಿ ಆಗಲೇ ಪೋಲಿಸ್ ಕಮಿಷನರ್ ಅವರು, ಚೀಫ್ ಸೆಕ್ರೆಟರಿ, ಕಂಟೋನಮೆಂಟಿನ ನೀಲಿ ಕಾರಿನಿಂದ ಇಳಿದ ನೀಲಿ ಸಮವಸ್ತ್ರ ಧರಿಸಿ ನೀಲಿ ಪೇಟಾ ಸುತ್ತಿದ್ದ ಸರದಾರಜಿ ಆರ್ಮಿಯವರು, ಆ ಸಾಹೇಬರು, ಈ ಸಾಹೇಬರು, ಎಲ್ಲರೂ ನೆರೆದಿದ್ದರು. ಅಷ...

Gadag Sahitya Sammelana

I wrote an article for the Kannada lit website wwww.Kendasampige.com http://www.kendasampige.com/article.php?id=3094 -ಗದಗ್ ಸಾಹಿತ್ಯ ಸಮ್ಮೇಳನ ಗಂಡಸರ ಮೂತ್ರವೇನು ಗೊಮೂತ್ರವೇ? ಗದಗಿನಲ್ಲಿ ನಡೆದ ೭೬ನೇ ಸಾಹಿತ್ಯ ಸಮ್ಮೇಳನದ ಬಗೆಗಿನ ಯಾವುದೇ ಲೇಖನಕ್ಕೆ ಕೊಡಬಹುದಾದ ಅತಿ ಉತ್ತಮ ಟೈಟಲ್ ಅಂದರೆ ಇದು. ಈ ಮಾತನ್ನು ಹೇಳಿದವರು ಗುಲ್ಬರ್ಗಾದ ಸಾಹಿತಿ ಹಾಗು ಮಹಿಳಾ ಹೋರಾಟಗಾರ್ತಿ ಮಲ್ಲಿಕಾ ಘಂಟಿ ಅವರು. ಗಂಡಸರು ಗೋವುಗಳಂತೆ ಸಾಧೂ ಪ್ರಾಣಿಗಳೆಂದೂ, ಅವರಿಗೆ ಸಂಬಂಧ ಪಟ್ಟ ಎಲ್ಲ ವಸ್ತುಗಳೂ ಪವಿತ್ರವೆಂದೂ ಇದರ ಅರ್ಥ ಖಂಡಿತ ಅಲ್ಲ. ಮಹಿಳೆ ಮತ್ತು ಬದುಕು ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಂಗಸರು ಹಾಗೂ ಗಂಡಸರು ಬಳಸುವ ಶೌಚಾಲಯ ಗಳಲ್ಲಿ ನಡೆಯುವ ತಾರತಮ್ಯದ ಬಗ್ಗೆ ತಿಳಿಸುವಾಗ ಈ ಕಣ್ಣಿಗೆ ಕಟ್ಟುವಂಥಹ ಉದಾಹರಣೆ ನೀಡಿದರು. '' ಗಂಡಸರ ಶೌಚಾಲಯಗಳಲ್ಲಿ ಮೂತ್ರಕ್ಕೆ ಶುಲ್ಕ ಇಲ್ಲ. ಸಂಡಾಸಕ್ಕೆ ಮಾತ್ರ ಇದೆ. ಆದರೆ ಹೆಂಗಸರ ಶೌಚಾಲಯಗಳಲ್ಲಿ ಮೂತ್ರಕ್ಕೂ ದುಡ್ಡು ಕೊಡಬೇಕು. ಬಡ ಹಳ್ಳಿಯ ಹೆಣ್ಣು ಮಕ್ಕಳ ಹತ್ತಿರ ಊಟಕ್ಕೇ ಕಾಸಿರುವುದಿಲ್ಲ. ಅಂಥದ್ದರಲ್ಲಿ ಮೂತ್ರಕ್ಕೆ ಹಣ ಕೊಡಿ ಎಂದರೆ ಹೆಂಗೆ ? ಅಷ್ಟಕ್ಕೂ ಈ ಬೇಧಭಾವ ಏಕೆ? ಗಂಡಸರ ಮೂತ್ರವೇನು ಗೊಮೂತ್ರವೇ?'' ಎಂದು ಅವರು ಕೇಳಿದ್ದು. ನಲ್ಲಿ ನೀರು ಇನ್ನು ಸಮ್ಮೇಳನ ಅಧ್ಯಕ್ಷರೊಡನೆ ಸಂವಾದದಲ್ಲಿ ನೆನಪಿನಲ್ಲಿ ಉಳಿವಂಥಹ ಮಾತು ಗಳನ್ನು ಆಡಿದವರು ಸಾಹಿತಿ ಮೀ...