Posts

Showing posts from August, 2010

Bellary, New York Times and a hapless journalist

-This is the story I wrote for the Kannada web portal www.kendasampige.com All rights rest with them. Wrongs rest with me ಬಳ್ಳಾರಿ ಗಣಿದಣಿಗಳ ಕುರಿತು ನ್ಯೂಯಾರ್ಕ್ ಟೈಮ್ಸ್ ನ ಜಿಮ್ ಯಾರ್ಡ್ಲಿ ಬರೆದದ್ದು ಲೋಕ ವಿಖ್ಯಾತವಾಗಿದೆ.ಆದರೆ ಅವರ ಜೊತೆಜೊತೆಗೇ ಇದ್ದ ನಮ್ಮ ಹೃಷಿಕೇಶ್ ದೇಸಾಯರು ಪಟ್ಟ ಪಡಿಪಾಟಲು ಇಲ್ಲಿದೆ. ಅಂದು ರಾತ್ರಿಪಾಳಿ ಮುಗಿಸಿ ಮಲಗಿದ್ದೆ. ಯಾರೋ ನನ್ನನ್ನು ಹಕ್ಕೊಂಡು ಹೊಡೆದಿದ್ದಾರೋ ಎನ್ನುವಂತೆ ನಿದ್ದೆ ಬಂತು. ನನ್ನ ಬಾಸ್ ಫೋನ್ ಬಂತು. ಧಡಕ್ಕನೇ ಎದ್ದೆ. ಆಗ ಚುಮುಚುಮು ೫ ಗಂಟೆ. ಇಷ್ಟೊತ್ತಿಗೆ ಫೋನ್ ಮಾಡ್ತಾರಲ್ಲೋ ‘......’, ಅಂದುಕೊಂಡೆ. ‘ನಾನೂ ಹತ್ತು ವರ್ಷದಿಂದ ನೋಡ್ತೇನಿ. ನಾನು ಕರೆದಾಗ ಒಂದು ದಿನ ಆದರೂ ಹಿಂಗ ಗಡಿಬಿಡಿ ಮಾಡೀರ‍್ಯಾ. ಆ ಸುಡುಗಾಡು ಕೆಲಸ, ಈ ಸುಡುಗಾಡು ಗಡಿಬಿಡಿ. ಹೊಗೊ ನಿಮ್ಮ ಮಂಜಾಳಾಗ', ಅಂತ ನನ್ನ ಹೆಂಡತಿ ಬೈದು ಮತ್ತೆ ಮಲಗಿದಳು. ರೂಢಿಯಂತೆ ಅದರಲ್ಲಿ ಸ್ಪೆಲಿಂಗ್ ಮಿಸ್ಟೇಕ್ ಕಂಡು ಹಿಡಿದರೆ ಹೊಡೆತ ತಿನ್ನುತೇನೆ ಎಂದು ಗೊತ್ತಾಗಿ ಸುಮ್ಮನಿದ್ದೆ. ಮನೆಯಲ್ಲಿ ಬಿಎಸ್ಸೆನ್ನೆಲ್ ಸಿಗ್ನಲ್ ಬರೋದಿಲ್ಲವಾದ್ದರಿಂದ ರಸ್ತೆಗೆ ಬಂದೆ. ಹಲೋ ಎಂದೆ. ಅತ್ತಲಿನವರಿಗೆ ಕೇಳಲಿಲ್ಲ ಎಂದು ಖಾತ್ರಿಯಾದ ಮೇಲೆ ಜೋರಾಗಿ ಹಲೋ ಎಂದೆ. ‘ದೇಸಾರ, ಬೆಳ ಬೆಳಿಗ್ಗೆ ಬ್ರೇಕಿಂಗ್ ನ್ಯೂಸು ಏನರೆಪಾ? ಗೌರಮೆಂಟು ಬಿತ್ತೋ? ಕ್ರೈಮ್ ಸುದ್ದಿಯೋ, ಪ್ಲೇನ್ ಕ್ರ್ಯಾಷೋ, ಪಬ್ ಅಟ್ಯಾಕೋ, ಮಿನಿಸ್ಟರ್ ಸ...

ನಾನು, ಬಳ್ಳಾರಿ ಹಾಗು ನ್ಯೂಯಾರ್ಕ್ ಟೈಮ್ಸ್

-ನಾನು ಕೆಂಡಸಂಪಿಗೆ.ಕಾಂ ನಲ್ಲಿ ಬರೆದ ಲಲಿತ ಪ್ರಬಂಧ ಬಳ್ಳಾರಿ ಗಣಿದಣಿಗಳ ಕುರಿತು ನ್ಯೂಯಾರ್ಕ್ ಟೈಮ್ಸ್ ನ ಜಿಮ್ ಯಾರ್ಡ್ಲಿ ಬರೆದದ್ದು ಲೋಕ ವಿಖ್ಯಾತವಾಗಿದೆ.ಆದರೆ ಅವರ ಜೊತೆಜೊತೆಗೇ ಇದ್ದ ನಮ್ಮ ಹೃಷಿಕೇಶ್ ದೇಸಾಯರು ಪಟ್ಟ ಪಡಿಪಾಟಲು ಇಲ್ಲಿದೆ. ಅಂದು ರಾತ್ರಿಪಾಳಿ ಮುಗಿಸಿ ಮಲಗಿದ್ದೆ. ಯಾರೋ ನನ್ನನ್ನು ಹಕ್ಕೊಂಡು ಹೊಡೆದಿದ್ದಾರೋ ಎನ್ನುವಂತೆ ನಿದ್ದೆ ಬಂತು. ನನ್ನ ಬಾಸ್ ಫೋನ್ ಬಂತು. ಧಡಕ್ಕನೇ ಎದ್ದೆ. ಆಗ ಚುಮುಚುಮು ೫ ಗಂಟೆ. ಇಷ್ಟೊತ್ತಿಗೆ ಫೋನ್ ಮಾಡ್ತಾರಲ್ಲೋ ‘......’, ಅಂದುಕೊಂಡೆ. ‘ನಾನೂ ಹತ್ತು ವರ್ಷದಿಂದ ನೋಡ್ತೇನಿ. ನಾನು ಕರೆದಾಗ ಒಂದು ದಿನ ಆದರೂ ಹಿಂಗ ಗಡಿಬಿಡಿ ಮಾಡೀರ‍್ಯಾ. ಆ ಸುಡುಗಾಡು ಕೆಲಸ, ಈ ಸುಡುಗಾಡು ಗಡಿಬಿಡಿ. ಹೊಗೊ ನಿಮ್ಮ ಮಂಜಾಳಾಗ', ಅಂತ ನನ್ನ ಹೆಂಡತಿ ಬೈದು ಮತ್ತೆ ಮಲಗಿದಳು. ರೂಢಿಯಂತೆ ಅದರಲ್ಲಿ ಸ್ಪೆಲಿಂಗ್ ಮಿಸ್ಟೇಕ್ ಕಂಡು ಹಿಡಿದರೆ ಹೊಡೆತ ತಿನ್ನುತೇನೆ ಎಂದು ಗೊತ್ತಾಗಿ ಸುಮ್ಮನಿದ್ದೆ. ಮನೆಯಲ್ಲಿ ಬಿಎಸ್ಸೆನ್ನೆಲ್ ಸಿಗ್ನಲ್ ಬರೋದಿಲ್ಲವಾದ್ದರಿಂದ ರಸ್ತೆಗೆ ಬಂದೆ. ಹಲೋ ಎಂದೆ. ಅತ್ತಲಿನವರಿಗೆ ಕೇಳಲಿಲ್ಲ ಎಂದು ಖಾತ್ರಿಯಾದ ಮೇಲೆ ಜೋರಾಗಿ ಹಲೋ ಎಂದೆ. ‘ದೇಸಾರ, ಬೆಳ ಬೆಳಿಗ್ಗೆ ಬ್ರೇಕಿಂಗ್ ನ್ಯೂಸು ಏನರೆಪಾ? ಗೌರಮೆಂಟು ಬಿತ್ತೋ? ಕ್ರೈಮ್ ಸುದ್ದಿಯೋ, ಪ್ಲೇನ್ ಕ್ರ್ಯಾಷೋ, ಪಬ್ ಅಟ್ಯಾಕೋ, ಮಿನಿಸ್ಟರ್ ಸ್ಕ್ಯಾಂಡಲ್ಲೋ, ಏನಾತು', ಅಂತ ಬಂದರು ಪಕ್ಕದ ಮನೆಯ ಕಾಳೆ. ಅವರು ರಾಜ್ಯ ಹಿರಿಯ ನಾಗರಿಕರ ಸ...