Posts

Showing posts from June, 2011

Rishikesh, Haridwar and Ramdev, a deadly threesome

ಹೃಷಿಕೇಶ್ ಬಹದೂರ್ ಹರಿದ್ವಾರದಿಂದ ಬರೆದ ರಾಮದೇವಾಯಣ ಹೃಷಿಕೇಶ್ ಬಹದ್ದೂರ್ ದೇಸಾಯಿ ಶುಕ್ರವಾರ, 24 ಜೂನ್ 2011 (02:53 IST) ಪಕ್ಕದ ಮನೆಗೆ ಸಕ್ಕರೆ ಕಡ ತರಲು ಸಹ ಮನೆಯಿಂದ ಹೊರ ಹೋಗದ ನಮ್ಮವ್ವ “ನಾನು ಇರೋದರಾಗ ಹರಿದ್ವಾರಕ್ಕೆ ಹೋಗಬೇಕು. ಕರಕೊಂಡು ಹೋಗ, ಬ್ಯಾರೆ ದಾರಿನ ಇಲ್ಲಾ ಈಗ” ಅಂತ ಕೂತಾಗ ನನಗೆ ಬೇರೆ ದಾರಿ ಕಾಣಲಿಲ್ಲ. ಕೊನೆಗೂ ಅವಳನ್ನು ಕರೆದುಕೊಂಡು ನಡೆದೆ. ಆಟೋ, ಬಸ್ಸು, ಟ್ರೇನು, ಜಟಕಾ, ಕುದುರೆ ಸವಾರಿ, ಡೋಲಿ ಇತ್ಯಾದಿ ನೂರಾ ಎಂಟು ವಾಹನಗಳನ್ನು ಏರಿ, ಇಳಿದು ಕೊನೆಗೆ ಹರಿದ್ವಾರದಲ್ಲಿ ನಿಂತೆವು. ಬೆಳಗಿನ ಚಳಿಯಲ್ಲಿ ಸಣ್ಣ ಹೋಟೆಲ್ ಒಂದರಲ್ಲಿ ಎರಡು ರೂಪಾಯಿಗೆ ಚಹಾ ಕುಡಿಯುತ್ತಿದ್ದಾಗ--- ಅಲ್ಲೇ, ಅಲ್ಲೇ ನೋಡಿ ನನಗೆ ಜ್ಞಾನೋದಯವಾಗಿದ್ದು. ಅಲ್ಲಿ ಸಿಕ್ಕ ಕೆಲವು ಜನರಿಂದ ನನಗೆ ಭಾರಿ ಕುತೂಹಲಕರ ಮಾಹಿತಿ ದೊರೆಯಿತು. ಅದರಿಂದ ನನಗೆ ನಮ್ಮ ದೇಶವನ್ನು ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂದು ಏಕೆ ಡಿವೈಡ್ ಮಾಡಿದ್ದಾರೆ ಎಂದು ನನಗೆ ಅರ್ಥವಾಯಿತು. ಅಷ್ಟೇ ಅಲ್ಲ, ಸಾವಿರಾರು ವರುಷಗಳಿಂದ ಮಹಾನ್ ಪಂಡಿತರ ಲೆವಲ್ಲಿನಲ್ಲಿ ನಡೆಯುತ್ತಿರುವ ಹರ ಹೆಚ್ಚೋ, ಹರಿ ಹೆಚ್ಚೋ ಎನ್ನುವ ವಾದವೂ ನನ್ನ ಮನಸ್ಸಿನಲ್ಲಿ ಕೊನೆಗೊಂಡಿತು. ನಾವೆಲ್ಲ ಅದಕ್ಕೆ ‘ಹರಿದ್ವಾರ’ ಎಂದರೆ ಉತ್ತರದವರು ಅದಕ್ಕೆ ‘ಹರದ್ವಾರ’ ಎನ್ನುತ್ತಾರೆ. ಇನ್ನು ಹರಿದ್ವಾರ ಎನ್ನುವ ಹೆಸರಿರುವ ಊರಿನಲ್ಲಿ ಹರಿಯ ದೇವಸ್ಥಾನಗಳಿಗಿಂತ ಹರ ಮಂದಿರಗಳೇ ಹೆಚ್ಚು. ಹರನನ್ನು ನೋಡಲು ಹರ