Spoof of BJP government in Karnataka-2
ಬಳ್ಳಾರಿ ಗಣಿಗಾಥಾ: ಶ್ರೀರಾಮುಲು ಸ್ವಪ್ನ ವಿಮಾನಯಾನ By ಹೃಷಿಕೇಶ್ ಬಹದ್ದೂರ್ ದೇಸಾಯಿ ಆ ಫೋನು ನನಗೆ ಅಮರ ಚಿತ್ರಕಥಾದ ಆಕಾಶವಾಣಿಯಂತೆ ಕೇಳಿತು. ಆ ಕಡೆಯಿಂದ ಮಾತಾಡಿದವರು ಶ್ರೀರಾಮುಲು ಅವರ ಪಿಎ. ‘ಅಲ್ರೀ ಬಳ್ಳಾರಿಗೆ ಯಾಕೆ ಹೋದಿರಿ? ಸಾಹೇಬರು ಬೆಂಗಳೂರಿನ ಹತ್ತಿರ ಜಕ್ಕೂರು ಏರೋಡ್ರೋಮ್ ಹತ್ತಿರ ಇದ್ದಾರೆ. ಅಲ್ಲೇ ಹೋಗಿ' ಅಂತ ಅಂದರು. ನಾನು ಜಕ್ಕೂರಿಗೆ ಹೋದೆವು. ಆದರೆ ಅಲ್ಲಿ ಅವರು ಎಲ್ಲೂ ಕಾಣಲಿಲ್ಲ. ಸಾಹೇಬರ ಸಹಾಯಕ ಸಾಹೇಬರಿಗೆ ಫೋನು ಮಾಡಿದರೆ ‘ಜೀವನದಲ್ಲಿ ತಲೆ ಎತ್ತಿ ಬದುಕುವುದು ಕಲೀರಿ ಸಾರ್' ಅಂತ ಫಿಲಾಸಫಿ ಮಾತಾಡಿದರು. ಮೇಲೆ ನೋಡಿದರೆ ಆಕಾಶದಲ್ಲಿ ಒಂದು ಡಿರಿಜಿಬಲ್ ಏರ್ ಷಿಪ್ (dirigible air ship) ಹಾರಾಡುತ್ತಾ ಇದೆ. ‘ಮೇಲೆ ಬನ್ನಿ' ಅಂತ ಸಾಹೇಬರ ಮತ್ತೊಬ್ಬ ಸಹಾಯಕರು ಒಂದು ಹಗ್ಗ ಇಳಿ ಬಿಟ್ಟರು. ಒಬ್ಬೊಬ್ಬರೇ ಮೇಲೆ ಹತ್ತಿ ಹೋದೆವು. ಒಳಗೆ ನಾನು ಕಂಡರಿಯದ ಇನ್ನೊಂದು ಜಗತ್ತೇ ಇದೆ. ಅಲ್ಲಿ ಎಲ್ಲರೀತಿಯ ಯಂತ್ರಗಳಿವೆ. ನೂರಾರು ಸುಪರ್ ಕಂಪ್ಯೂಟರ್ ಗಳು, ಅವನ್ನು ನಿಯಂತ್ರಿಸಲು ಇನ್ನೊಂದು ಸುಪರ್ ಕಂಪ್ಯೂಟರ್, ಧ್ವನಿ ನಿಯಂತ್ರಿತ ರೊಬೊಟ್ ಗಳು, ನೀರು ಬೇಕಿಲ್ಲದ ಟಾಯ್ಲೆಟ್, ಊಟವಾದ ತಕ್ಷಣ ಹಾಸಿಗೆಯಾಗಿಬಿಡುವ ಡೈನಿಂಗ್ ಟೇಬಲ್, ಎಲ್ಲ. ಚಿಯರ್ ಫುಲ್ ಮೋದಿ ಇನ್ನು ಅಲ್ಲಿ ಸಚಿವರ ಆಫೀಸೇ ಅಲ್ಲಿದೆ. ಅಲ್ಲಿಯೇ ಪ್ರಿನ್ಸಿಪಲ್ ಸೆಕ್ರೆಟರಿ, ಅಂಡರ್ ಸೆಕ್ರೆಟರಿ, ಓವರ್ ಸೆಕ್ರೆಟರಿ ಎಲ್ಲರೂ ಇದ್ದಾರೆ. ಹೊಸ ಹಾಲಿವುಡ್...