Democracy for Dummies-1
ಬಡಪಾಯಿಗಳಿಗೆ ಕೆಲವು ಡೆಮಾಕ್ರಸಿ ಪಾಠಗಳು By ಹೃಷಿಕೇಶ್ ಬಹದ್ದೂರ್ ದೇಸಾಯಿ ಕರುನಾಡಲ್ಲಿ ಉಂಟಾಗುತ್ತಿರುವ ತಳಮಳಗಳ ಅರಿವಾಗದೆ ಪಿಳಿಪಿಳಿ ಕಣ್ಣು ಬಿಡುತ್ತಿರುವ ಬಡಪಾಯಿಗಳಿಗಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿಕೊಡುವ ಕೆಲವು ಪ್ರಾಥಮಿಕ ಪಾಠಗಳು ಇಲ್ಲಿವೆ ಸೋಮವಾರ ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಟಾಖಟಿಯನ್ನು ಟಿವಿಯಲ್ಲಿ ನೋಡಿದವರಿಗೆ ಗೊಂದಲ ಆಗಿರಬಹುದು, ಏನೂ ತಿಳಿಯದೇ ಇರದಿರಬಹುದು ಅಥವಾ ಪೂರ್ವಯೋರೋಪಿನ ದೇಶದ ಕಾಮೆಡಿ ಚಿತ್ರ ನೋಡಿದ ಅನುಭವ ಆಗಿರಬಹುದು. ಅಂಥವರು ಟಿವಿ ಚಾನೆಲ್ ಅನ್ನು ಮ್ಯೂಟ್ ಆಗಿಟ್ಟಿರಬಹುದು. ಹಾಗೆಂದು ಅವರಿಗೇನೂ ಮನರಂಜನೆ ಕಮ್ಮಿ ಆಗಿರಲಿಕ್ಕಿಲ್ಲ. ಹಾಗಾದರೆ ನಿಜವಾಗಿಯೂ ನಡೆದದ್ದೇನು? ಎನ್ನುವ ವಿಷಯದ ಬಗ್ಗೆ ಬರೆಯೋಣ ಎನ್ನಿಸಿತು. ಹೇಗೂ ಇದು ಕಂಪ್ಯೂಟರ್ಸ್ ಫಾರ್ ಡಮ್ಮೀಸ್ ಸರಣಿಯಲ್ಲಿ ಡೆಮಾಕ್ರೆಸಿ ಫಾರ್ ದ ಇನ್ ಡಿಫರೆಂಟ್ ಎಂದು ಪುಸ್ತಕರೂಪದಲ್ಲಿ ಹೊರಬರಲಿದೆ. ಕೆಂಡಸಂಪಿಗೆ ಓದುಗರಿಗಾಗಿ ಇದೊಂದು ಪೈರೆಟೆಡ್ ಕಾಪಿ. ೧. ಐದೈದು ವರ್ಷಕ್ಕೆ ಬರಬೇಕಾದ ಆದರೆ ಹಗಲೆಲ್ಲ ಬರುವ ಕಾಮೆಡಿ ಬೀದಿ ನಾಟಕಗಳಿಗೆ ಚುನಾವಣೆಗಳು ಎಂದು ಹೆಸರು. ೨. ಇಂಥಾ ಚುನಾವಣೆಗಳಲ್ಲಿ ನಾವು ನಮ್ಮ ಪರವಾಗಿ ಶಾಸನ ಮಾಡುವ ಹಾಗೂ ವಿವಿಧ ಇಲಾಖೆಗಳು ವೆಚ್ಚ ಮಾಡುವ ಹಣದ ಲೆಕ್ಕ ತಪಾಸು ಮಾಡಲು ಕಳಿಸುವ ಜನರಿಗೆ ಶಾಸಕ ಅಥವಾ ಎಮ್ಮೆಲ್ಲೆ ಎಂದು ಹೆಸರು. ೩. ತಾಯಿ ಭುವನೇಶ್ವರಿಯ ಕೃಪೆಯಿಂದ ಆರಿಸಿ ಬಂದ ಇಂಥ ಪುಣ್ಯಾತ್ಮರು ರಾಜ್ಯದ...