ಜೆಹಾದ್ ಎಂದರೆ ಏನು?

ಇಸ್ಲಾಮಿನ ಮೂರನೇ ಕಲೀಫಾ ಅಲಿ ಅವರು ಧಮ೯ ಯುದ್ಧವೊಂದರಲ್ಲಿ ಪಾಲ್ಗೊಂಡಿದ್ದರು. ಇವರ ಮೇಲೆ ದಾಳಿ ಮಾಡಲು ಬಂದ ಎದುರಾಳಿ ಸೈನಿಕನೊಬ್ಬನನ್ನು ಸೋಲಿಸಿದರು. ಇನ್ನೇನು ಅವನನ್ನು ಕೊಲ್ಲಬೇಕು ಎಂದು ಖಡ್ಗ ಎತ್ತಿದಾಗ ಅವನು ಇವರ ಮುಖದಮೇಲೆ ಉಗುಳಿದ.
ಇವರು ಖಡ್ಗವನ್ನು ಇಳಿಸಿದರು. ಅವನ ಜೀವ ಉಳಿಸಿದರು. ಅವನು ಯುದ್ಧ ಕೈದಿಯಾದ.
ಅವನನ್ನು ಜೈಲಿಗೆ ಕಳಿಸುವಾಗ ಅವನು ಅಲಿಯವರನ್ನು ಕೇಳಿದ. "ಸ್ವಾಮಿ, ನಿಮ್ಮ ನಡತೆ ನನಗೆ ಅಥ೯ವಾಗಲಿಲ್ಲ. ನಾನು ನಿಮ್ಮ ಮುಖದ ಮೇಲೆ ಉಗುಳಿದಾಗ ನೀವು ಸಿಟ್ಟಿಗೆದ್ದು ನನ್ನನ್ನು ಕೊಲ್ಲುತ್ತೀರೆಂದು ತಿಳಿದಿದ್ದೆ. ಆದರೆ ನೀವು ನನ್ನನ್ನು ಜೀವ ಸಹಿತ ಉಳಿಸಿದಿರಿ. ಯಾಕೆ?"
ಅಲಿ ಹೇಳಿದರು: ನೋಡು, ನೀನು ನನ್ನ ಮುಖದ ಮೇಲೆ ಉಗುಳಿದಾಗ ನನಗೆ ಕೋಪ ಬಂದಿದ್ದು ನಿಜ. ಆದರೆ ನಾನು ಇಲ್ಲಿಗೆ ಬಂದಿದ್ದು ಜೆಹಾದ್ ನಡೆಸಲು. ನನ್ನ ನಿನ್ನ ನಡುವಿನ ವೈಯಕ್ತಿಕ ದ್ವೇಷ ಸಾಧಿಸಲು ಅಲ್ಲ. ನಿನ್ನ ಮೇಲಿನ ಕೋಪದಿಂದ ನಿನ್ನನ್ನು ಕೊಂದರೆ ಅದು ಪವಿತ್ರ ಜೆಹಾದ್ ಹೇಗಾದೀತು?. ನನ್ನ ನಿನ್ನ ನಡುವಿನ ಬೀದಿ ಜಗಳವಾದೀತು ಅಷ್ಟೇ"

Comments

Keshav.Kulkarni said…
Is it history or story? Where is the reference? I am keen.

Popular posts from this blog

``All Muslims are not Terrorists, But all Terrorists are Muslims''

Gowda and Gore

Black Buck resort in Bidar by Jungle Lodges and Resorts